19.1 C
New York
Tuesday, October 22, 2024

Buy now

spot_img

ರಾಷ್ಟ್ರೀಯ ವಿಚಾರ ಸಂಕಿರಣಕ್ಕಾಗಿ ಶಿವಾನಂದ ಗೋಗಾವ ಆಯ್ಕೆ

ರಾಷ್ಟ್ರೀಯ ವಿಚಾರ ಸಂಕಿರಣಕ್ಕಾಗಿ
ಶಿವಾನಂದ ಗೋಗಾವ ಆಯ್ಕೆ

ವಾಗದರಿ
ಅಕ್ಕಲಕೋಟ ತಾಲೂಕಿನ ವಾಗದರಿ ಕನ್ನಡ ಶಾಲೆಯ ಶಿಕ್ಷಕ ಸೋಲಾಪುರ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಶಿವಾನಂದ ಗೋಗಾವರನ್ನು ವಿಶ್ವ ಬಸವ ಧರ್ಮ ಟ್ರಸ್ಟ್ ಅನುಭವ ಮಂಟಪ ಬಸವಕಲ್ಯಾಣ ದಲ್ಲಿ ನಡೆಯುವ ಎರಡು ದಿನಗಳ ‘ಶಿವಯೋಗಿ ಸಿದ್ದರಾಮ ಸಾಂಸ್ಕೃತಿಕ ಮುಖಾಮುಖಿ’ ರಾಷ್ಟ್ರೀಯ ವಿಚಾರ ಸಂಕಿರಣಕ್ಕಾಗಿ ಆಯ್ಕೆ ಮಾಡಲಾಗಿದೆ.
ಜುಲೈ 6 ಮತ್ತು 7 .2024 ರಂದು ಬಸವಕಲ್ಯಾಣದ ಹೊಸ ಅನುಭವ ಮಂಟಪದಲ್ಲಿ ನಡೆಯುವ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿ ರ್ಣದಲ್ಲಿ ಶಿವಾನಂದ ಗೋಗಾವ ಅವರು ‘ಶಿವಯೋಗಿ ಸಿದ್ದರಾಮನ ಜಾತ್ರೆ ಮತ್ತು ಉತ್ಸವಗಳು’ ಕುರಿತು ಬರೆದ ಲೇಖನ ಈ ರಾಷ್ಟ್ರೀಯ ವಿಚಾರ ಸಂಕಿರ್ಣಕ್ಕಾಗಿ ಆಯ್ಕೆಯಾಗಿದ್ದು, ಈ ವಿಚಾರ ಸಂಕಿರ್ಣದಲ್ಲಿ ಅವರು ಬರೆದ ಈ ಲೇಖನ ಮಂಡಿಸುವ ಅವಕಾಶ ದೊರೆತಿದೆ.
ಈ ರಾಷ್ಟ್ರೀಯ ವಿಚಾರ ಸಂಕಿರ್ಣದಲ್ಲಿ ಕರ್ನಾಟಕ, ಮಹಾರಾಷ್ಟ್ರ ಅಲ್ಲದೆ ದೇಶದ ವಿವಿಧ ಭಾಗಗಳಿಂದ ತಜ್ಞರು, ವಿದ್ವಾಂಸರು ಆಗಮಿಸಿ ಅವರ ವಿಚಾರಗಳನ್ನು ಈ ರಾಷ್ಟ್ರೀಯ ವಿಚಾರ ಸಂಕಿ ರ್ಣದಲ್ಲಿ ಮಂಡಿಸಲಿದ್ದಾರೆ.ಇದು ಸೊಲ್ಲಾಪುರದ ಸಿದ್ಧರಾಮನ ಕುರಿತು ಇರುವುದು ವಿಶೇಷವಾಗಿದೆ.
ಈ ರಾಷ್ಟ್ರೀಯ ವಿಚಾರ ಸಂಕಿರಣ ವಿಶ್ವಬಸವ ಧರ್ಮ ಟ್ರಸ್ಟ್ ಅನುಭವ ಮಂಟಪದ ಅಧ್ಯಕ್ಷರಾದ ಭಾಲ್ಕಿಯ ಡಾ. ಬಸವಲಿಂಗಪಟ್ಟ ದೇವರ ನೇತೃತ್ವದಲ್ಲಿ, ಶರಣಬಸವೇಶ್ವರ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಕಲ್ಯಾಣರಾವ ಪಾಟೀಲರ ಕ್ರಿಯಾಯೋಜನೆಯಲ್ಲಿ ನಡೆಯಲಿದೆ.ಕರ್ನಾಟಕದ ವಿವಿಧ ಮಠಾಧೀಶರು ಈ ರಾಷ್ಟ್ರೀಯ ವಿಚಾರ ಸಂಕಿರ್ಣದಲ್ಲಿ ಭಾಗವಹಿಸಲಿದ್ದಾರೆ.

ಶಿವಾನಂದ ಗೋಗಾವ ಅವರು ಕಳೆದ 20 ವರ್ಷಗಳಿಂದ ಸೊಲ್ಲಾಪುರ ಗಡಿ ಭಾಗದಲ್ಲಿ ಶರಣ ಸಾಹಿತ್ಯ ಪ್ರಚಾರ ಮತ್ತು ಪ್ರಚಾರ ಮಾಡುತ್ತಿರುವ ಹಿನ್ನೆಲೆಯಲ್ಲಿ, ವಿಜಯ ಕರ್ನಾಟಕ ಪತ್ರಿಕೆಯ ಮೂಲಕ ಕಳೆದ 17 ವರ್ಷಗಳಿಂದ ಸಿದ್ದರಾಮನ ಕುರಿತು ವಿಶೇಷ ಪುರವಣಿ ತೆಗೆದು ‘ಶಿವಯೋಗಿ ಸಿದ್ದರಾಮನ’ ವಚನ , ತತ್ವ ಸಿದ್ಧಾಂತ, ವಿಚಾರಧಾರೆಗಳನ್ನು ಪ್ರಸಾರ ಮಾಡುವಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರಿಂದ ಈ ಅವಕಾಶ ಅವರಿಗೆ ದೊರೆತಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಶಿವಾನಂದ ಗೋಗಾವ ಅವರು ತಾವು ಕಳೆದ ಹಲವಾರು ವರ್ಷಗಳಿಂದ ಮಾಡಿದ ಶ್ರಮಕ್ಕಾಗಿ ಈ ಅವಕಾಶ ಸಿಕ್ಕಿದೆ.ಬಸವಕಲ್ಯಾಣದಲ್ಲಿ ನಡೆಯುತ್ತಿರುವ ಈ ರಾಷ್ಟ್ರೀಯ ವಿಚಾರ ಸಂಕಿರ್ಣದಲ್ಲಿ ಭಾಗವಹಿಸಲು ತಮಗೆ ಅವಕಾಶ ಸಿಕ್ಕಿದ್ದು ಅದು ನನ್ನ ಭಾಗ್ಯ ಎಂದರು.

- Advertisement -spot_img

Related Articles

Latest Articles

- Advertisement -spot_img
- Advertisement -spot_img